ಮಾನಸ ಗಂಗೋತ್ರಿ

ಇದು ಮಾನಸ ಗಂಗೋತ್ರಿ ನಾವುಗಳೆಲ್ಲ ಯಾತ್ರಿ, ಬರಬೇಕು, ಗೌರವಿಸಬೇಕು, ಪೂಜಿಸಬೇಕು! ಕೈ ಮುಗಿದು ಮುಂದಿನ ಯಾತ್ರಿಗಳಿಗೆ ದಾರಿ ದೀಪವಾಗಬೇಕು! ಕನಸುಗಳನ್ನು ಚಲಾವಣೆಗೆ ತರುವ ಜಾಗವಿದು. ಉಸಿರಾಟದ ತೊಂದರೆಯನ್ನೆ ಮರೆಸುವ ಭಯವಿದು. ಪರಿಪೂರ್ಣತೆಯ ಜ್ಞಾನವಿದು. ಬೀಳ್ಕೊಡುಗೆ ದಿನದ ಮೌನವಿದು. ಭಾಷೆಯನ್ನೇ ಹಸಿರಾಗಿಸಿ... ಕನ್ನಡ ಡಿಂಡಿಮ ಸಾರಿದ ಆಲಯ... ಕುವೆಂಪು ಅವರೇ ಹೆಸರಿಟ್ಟ ವಿದ್ಯಾಲಯ... ನಮ್ಮ ಮಾನಸ ಗಂಗೋತ್ರಿ... ~ ಅರ್ಚನಾ ಸುಂಡವಾಳು